ಕೋಣೆ ಮತ್ತು ಆಸರೆ ಕಂಬ ಪದ್ಧತಿ

ಗಣಿಗಳಿಂದ ಕಲ್ಲಿದ್ದಲನ್ನು ಹೊರ ತೆಗೆಯಲು ಅನುಸರಿಸುವ ವಿವಿಧ ಪದ್ಧತಿಗಳಲ್ಲಿ ಮುಖ್ಯವಾದದ್ದು. ಕಲ್ಲಿದ್ದಲಿನ ಸ್ತರ ದಪ್ಪವಾಗಿದ್ದು ಭೂಮೇಲ್ಮೈಗೆ ಅತಿಹೆಚ್ಚಿನ ಆಳದಲ್ಲಿರದಿದ್ದಾಗ, ಈ ಪದ್ಧತಿಯನ್ನು ಅನುಸರಿಸಲಾಗುವುದು. ಕಿರಿದಾದ ಮತ್ತು ಸಮಾಂತರ ಸುರಂಗಮಾರ್ಗಗಳನ್ನು ಕಲ್ಲಿದ್ದಲು ಸ್ತರದಲ್ಲಿ ತೋಡುವ ಮುಖಾಂತರ ಪೂರ್ಣ ಕಲ್ಲಿದ್ದಲನ್ನು ಚದರ ಅಥವಾ ಆಯ ಉಳ್ಳ ಆಸರೆ ಕಂಬಗಳನ್ನಾಗಿ ವಿಭಾಗಿಸಲಾಗುವುದು. ಅನಂತರ ಅವನ್ನು ಕಲ್ಲಿದ್ದಲು ಕತ್ತರಿಸುವ ಯಂತ್ರದ ಸಹಾಯದಿಂದ ಸ್ವಲ್ಪ ಕತ್ತರಿಸಿ ಆಸರೆ ಕಂಬಗಳನ್ನು ತೆಗೆದು ಇವುಗಳ ಬದಲು ಬೇರೆ ರೀತಿ ಆಧಾರಗಳನ್ನು ಒದಗಿಸಲಾಗುವುದು. ಮರದ ದಿಮ್ಮಿ, ಕ್ರಿಬ್ ಜೋಡಣೆ ಮತ್ತು ಗ್ರಾನೈಟ್ ಪ್ಯಾಕ್‍ವಾಲ್‍ಗಳನ್ನು ಆಧಾರಗಳಾಗಿ ಉಪಯೋಗಿಸಲಾಗುವುದು. ಈಚೆಗೆ ಈ ಪದ್ಧತಿಯನ್ನು ಅನುಸರಿಸುವ ಕೆಲವು ಕಲ್ಲಿದ್ದಲು ಗಣಿಗಳಲ್ಲಿ ಸ್ಯಾಂಡ್ ಸ್ಟವಿಂಗನ್ನು ಸಹ ಮುಖ್ಯ ಆಧಾರವಾಗಿ ಉಪಯೋಗಿಸುವರು.					(ಟಿ.ಟಿ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ